ಸರ್ಫರೋಷೀ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈ.......
ದೇಖನಾ ಹೈ ಜೋರ್ ಕಿತನಾ ಬಾಜ್ಹುವೇ ಖಾತಿಲ್ ಮೇ ಹೈ. .....
ಜಿಂದಗೀ ತೋ ಅಪನೀ ಮೆಹಮಾನ್ ಮೌತ್‍ಕೀ ಮೆಹಫಿಲ್ ಮೇ ಹೈ...
ಸರ್ಫರೋಷೀ ಕೀ ತಮನ್ನಾ ಅಬ್ ಹಮಾರೀ ದಿಲ್ ಮೇ ಹೈ.......!
ತ್ಯಾಗ ಬಲಿದಾನಗಳ ಅಭಲಾಷೆಯಷ್ಟೇ ಮನದಲ್ಲಿಲ್ಲಾ....
ಬಂಧನಗಳ ಮುಕ್ತಿ ಸಂಕಲ್ಪಕೆ ಕಾದಿದೆ ಭವವೆಲ್ಲಾ..!....
ಈ ಸಾಲುಗಳು ಅವರ ಉಸಿರಾಗಿತ್ತು, ಅವರ ಬದುಕಿನ ಏಕೈಕ ಧ್ಯೇಯವಾಗಿತ್ತು.
ಅವರು ಅಪ್ರತಿಮ ದೇಶಭಕ್ತರಷ್ಟೇ ಅಲ್ಲಾ, ದೇಶವನ್ನು ದಾಸ್ಯದಿಂದ ಸ್ವತಂತ್ರಗೊಳಿಸಲು ಕಂಕಣಬದ್ಧರಾಗಿ ತಮ್ಮ ಬದುಕನ್ನೇ ಆಹುತಿ ನೀಡಿ ಪ್ರಜ್ವಲಿಸಿದ ಹೋರಾಟಗಾರರು!
ಪಂಜಾಬಿನ ಲ್ಯಾಲ್‍ಪುರ್ ಜಿಲ್ಲೆಯ 'ಬಾಂಗಾ' ಎಂಬ ಹಳ್ಳಿಯಲ್ಲಿ 28 ಸೆಪ್ಟೆಂಬರ್, 1907ರಂದು ಜನ್ಮ ತಳೆದವನು 'ಸರ್ದಾರ್' ಭಗತ್ ಸಿಂಗ್. ಅವನು ಜನಿಸಿದ ದಿನದಂದೇ ಅವನ ತಂದೆ ಮತ್ತು ಚಿಕ್ಕಪ್ಪಂದಿರು ಜೈಲಿನಿಂದ ಬಂಧಮುಕ್ತರಾದರು. ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟದಲ್ಲಿ 'ಗದಾರ್ ಪಕ್ಷ'ದೊಂದಿಗೆ ಗುರುತಿಸಿಕೊಂಡಿದ್ದರು. ಭಗತ್ ಹುಟ್ಟಿದ ದಿನ ಮತ್ತವರ ಬಿಡುಗಡೆಯೂ ತನ್ನ ತಂದೆ ಚಿಕ್ಕಪ್ಪಂದಿರ ನಡುವೆ ತೇಜಸ್ವೀ ಬಾಲಕನಾಗಿ ಬೆಳೆಯುತ್ತಿದ್ದ ಅವನ ಪರಿವಾರದವರು ಯಾವುದೇ ಆಂಗ್ಲ ಶಾಲೆಗೆ ಕಳುಹಿಸಲಿಚ್ಛಿಸದ ಕಾರಣ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಸಂಸ್ಕಾರದಲ್ಲಿ ಬಾಲಕ ಭಗತ್ ಬೆಳೆದನು. ತನ್ನ ಬಾಲ್ಯದಿಂದಲೇ ದೇಶಭಕ್ತಿಯ ಕಿಚ್ಚನ್ನು ಹೊತ್ತಿದ್ದ ಭಗತ್‍ನನ್ನು ದಯಾನಂದರ ಶಾಲೆಗೆ ಸೇರಿಸಿ, ನಂತರ ಲಾಲಾ ಲಜಪತ್ ರಾಯರ ಕಾಲೇಜು ಸೇರಿ ವಿದ್ಯಾಭ್ಯಾಸ ಮುಂದುವರೆಸಬೇಕಾಯಿತು. ಶಾಲಾ-ಕಾಲೇಜು ಹಂತದಲ್ಲಿಯೇ ಭಗತ್ ಸ್ವಾತಂತ್ರದ ಕನಸನ್ನು ಹೊತ್ತಿದ್ದು, ನಾಟಕ ಪ್ರಾತ್ಯಕ್ಷಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಅತ್ಯುತ್ತಮ ವಾಗ್ಮಿಯಾಗಿಯೂ ದೇಶಭಕ್ತಿಯನ್ನು ಪ್ರತಿಬಿಂಬಿಸುವ ಗೀತೆಗಳನ್ನೂ ರಚಿಸಿ ಹಾಡುತ್ತಿದ್ದನು.
ಅವನ ಬದುಕಿನಲ್ಲಿನ ಮಹತ್ವದ ಪರಿವರ್ತನೆ ಬಂದದ್ದು ಮುಂದೆ ಅವನು 1919ರಲ್ಲಿ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದ ಸ್ಥಳವನ್ನು ಕಣ್ಣಾರೆ ಕಂಡಾಗಲೇ! ಮುಗ್ಧ ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ಧಾಳಿ ಮತ್ತು ನರಮೇಧದ ಘಟನೆಯ ವರದಿ ಅವನಲ್ಲಿನ ಕ್ರಾಂತಿಯ ಕಿಚ್ಚನ್ನು ಇಮ್ಮಡಿಸಿತು. ಮುಂದೆ, 1920ರಲ್ಲಿ ಗಾಂಧೀಜಿಯ ಬ್ರಿಟಿಷರ ವಿರುದ್ಧದ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡನು.
ಶಿವರಾಮ ಹರಿ 'ರಾಜಗುರು' ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಆಗಸ್ಟ್ 24, 1908ರಲ್ಲಿ ಪುಣೆಯ ಬಳಿಯ 'ಖೇಡ್'ನಲ್ಲಿ ಜನಿಸಿದ್ದು ಸಂಸ್ಕøತ ಭಾಷೆಯ ಪಾಂಡಿತ್ಯ ಪಡೆದಿದ್ದು, 'ಶಿವಾಜಿ ಮಹಾರಾಜ'ನ ಗೆರಿಲ್ಲಾ ಯುದ್ಧ ವೈಖರಿಯನ್ನು ಮೆಚ್ಚಿದ್ದನು. ಮುಂದೆ ವಾರಣಾಸಿಯಲ್ಲಿ ಭಗತನೊಂದಿಗೆ ಸೇರಿದನು. ಅವನ ಧೈರ್ಯ ಮತ್ತು ನಿಶ್ಚಿತ ಗುರಿಯಿಂದಾಗಿ 'ಗನ್‍ಮ್ಯಾನ್' ಎಂದೇ ಹೆಸರಾಗಿದ್ದ.
ಸುಖದೇವ ಥಾಪರ್: 15, ಮೇ 1907ರಲ್ಲಿ ಜನಿಸಿದ್ದ ಪಂಜಾಬಿನ ಮತ್ತೊಂದು ಹುಲಿ. ತನ್ನ ವೈಜ್ಞಾನಿಕ ವಿಚಾರಗಳೊಂದಿಗೆ ಕ್ರಾಂತಿಕಾರಕ ಆಲೋಚನೆಗಳಿಂದ 'ನೌಜವಾನ್ ಭಾರತ್ ಸಭಾ' ಪತ್ರಿಕೆಯನ್ನು ಆರಂಭಿಸಿ ಬ್ರಿಟಿಷರ ವಿರುದ್ಧ ಸಮರ ಸಾರಿದ್ದ. ಮುಂದೆ ಭಗತ್ ಮತ್ತಿತರರೊಂದಿಗೆ ಕೂಡಿ ಸ್ಚಾತಂತ್ರ ಸಂಗ್ರಾಮಕ್ಕಿಳಿದ.
ಈ ಮೂವರ ಮುಂದಿದ್ದ ಗುರಿಯೊಂದೇ!........
ಅವರಿಗೆ ಕೇವಲ ಶಕ್ತಿಯೊಂದೇ ಅಲ್ಲಾ, ಯುಕ್ತಿಯಿಂದಲೇ ಶತೃಗಳನ್ನು ಗೆಲ್ಲಬೇಕೆಂಬ ಅರಿವಿತ್ತು.ಸೆರೆಯಲ್ಲಿದ್ದರೂ ಅವನದು ಎಡೆಬಿಡದ ಕ್ರಾಂತಿ, ಅವನ ವಿಚಾರ ವೈಖರಿ, ಅಪಾರ ಜ್ಞಾನವೆಲ್ಲವೂ ಅಭಿವ್ಯಕ್ತವಾದವು....ಜೈಲಿನಲ್ಲಿ ಆಹಾರ ಸೇವಿಸಲು ನಿರಾಕರಿಸಿದಾಗ ಬಲವಂತವಾಗಿ ಪೈಪುಗಳ ಮೂಲಕ ಆಹಾರವನ್ನು ತುರುಕುವ ಪ್ರಯತ್ನ ನಡೆಯಿತು, ಕುಡಿಯಲು ನೀರನ್ನೂ ಕೊಡದೆ ನಾನ ಹಿಂಸೆಗಳನ್ನು ನೀಡಲಾಯ್ತು! ಆದರೆ ಭಗತ್ ಸಿಂಗ್ ಅಸಾಮಾನ್ಯ ಮನೋಬಲವನ್ನು ಹೊಂದಿದ್ದ ಧೀರ!
ಸೆರೆಯಲ್ಲಿದ್ದ ಭಾರತೀಯ ಕೈದಿಗಳನ್ನು ಅಮಾನುಷವಾಗಿ ಬ್ರಿಟಿಷರು ನಡೆಸಿಕೊಳ್ಳುತ್ತಿದ್ದ ರೀತಿಯನ್ನೂ ಕಂಡು ಕ್ರೋಧಗೊಂಡ ಅವನು ಅಲ್ಲಿಯೂ ಅದನ್ನು ತಪ್ಪೆಂದು ಸಮರ್ಥಿಸಿದ.ಅಲ್ಲಿನ ಅವನ ದಿನಚರಿಯಲ್ಲಿ ಸತತವಾಗಿ ಚಿಂತನೆ ಮತ್ತು ಬರಹಗಳು ಪ್ರಮುಖವಾದವು. ಭಾರತದಲ್ಲದೆ ವಿದೇಶದಲ್ಲೂ ಭಗತ್ ಸಂಗ್ ಕುರಿತು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು! ಅನೇಕ ಪ್ರಸಿದ್ಧ ವ್ಯಕ್ತಿಗಳು ಅವನನ್ನು ಭೇಟಿಯಿತ್ತರು, ಸೆರೆಮನೆಯಲ್ಲಿಯೇ ಅವನನ್ನು ಪತ್ರಕರ್ತರು ಸಂಪರ್ಕಿಸಿ ಸಮಾಲೋಚನೆಯನ್ನೂ ನಡೆಸುತ್ತಿದ್ದರು.
ಅನೇಕ ದಿನಗಳ ವಿಚಾರಣೆಗಳ ನಂತರ ಭಗತ್‍ನ ವಾದಗಳೆಲ್ಲವೂ ತಿರಸ್ಕøತಗೊಂಡವು. ಭಗತ್ ಸಿಂಗ್, ರಾಜ್‍ಗುರು ಮತ್ತು ಸುಖದೇವ್ ಅವರನ್ನು 23 ಮಾರ್ಚ್ 1931ರಂದು ನೇಣುಕಂಬಕ್ಕೇರಿಸಬೇಕೆಂದು ನ್ಯಾಯಾಲಯ ತೀರ್ಪು ನೀಡಿತು.
ಮೇರಾ ರಂಗ್ ದೇ ಬಸಂತೀ ಚೋಲಾ... ಮೇರಾ ರಂಗ್ ದೇ........
ಭಾರತವೆಂಬ ಈ ಪುಣ್ಯಭೂಮಿಯಲ್ಲಿ ಜನ್ಮ ತಳೆದು ಬಣ್ಣಗಳನ್ನೆರಚಿ,
ದುಷ್ಟರಾಳ್ವಿಕೆಯ ದಾಸ್ಯದ ಪ್ರಹಾರಗಳಿಂದ ಘಾಸಿತಗೊಂಡು,
ಅಜ್ಞಾನವೆಂಬ ಕಪ್ಪು ಕತ್ತಲೆಯಲ್ಲಿ ದೇಶ ನಿದ್ರಿಸುತ್ತಿದ್ದಾಗ.....
ಸೋಲಿಲ್ಲದ ಸರದಾರರಾಗಿ ಹೋರಾಡಿ ಭಾರತಾಂಬೆಯ ಮಡಿಲಲ್ಲಿ ತಮ್ಮ ಬದುಕನ್ನೇ ಅರ್ಪಿಸಿದ ಭಗತ್, ಸುಖದೇವ ರಾಜಗುರು ಬಲಿದಾನಿಗಳಾಗಿ ಉರಿಸಿಟ್ಟ ಕ್ರಾಂತಿಯಿನ್ನೂ ಹಸಿರಾಗಿದೆ.....
(From various internet sources)